Book title: Shree Shankarayana
Author: K P Rathnakara Bhatta
ISBN: 978-9-38-277300-9
Language: Kannada
Released: 18-May-2013
Pages: 777
Genre: Biography
About: A poetic biography of Sri Adi Shankara Bhagavatpadacharya, written in Kannada language, with 2448 Bhamini metered poems covering the biographical collection of the life events.
The book also includes 88 different shlokas/hymns of Sanskrit transliterated in Kannada for ease of read, composed by HH Shree Adi Shankaracharya Himself.
The book has two main parts - the biography and the hymns. The biography section has 102 chapters including a prologue and an epilogue. Each chapter has 24 of Bhamini metered poems with a chapter synopsis and a pictorial end note relevant to the chapter.
The book has been blessed with Aashirvachanas from the following -
1. Dakṣiṇāmnāya śrī śāradā pīṭha, śṛṁgeri
2. Paścimāmnāya śrī śāradā pīṭha, Dvārakā
3. Mūlāmnāya śrī kāmakoṭī pīṭha, Kāṁcīpuram
4. śrī kūḍali-śṛṁgeri mahā saṁsthānam, Kūḍali
5. śrī ādi śaṁkarācārya śāradā lakśmīnṛsiṁha pīṭham, Hariharapura
6. śrī soṁdā svarṇavallī mahā saṁsthāna, Maṭhadevaḽa, U.Ka
7. śrīmadrāmacaṁdrāpura maṭha, Haniya, Hŏsanagara tālūk
8. śrī maṭha, Bāḽekudru, Haṁgārakaṭṭĕ
9. śrī jñāneśvari pīṭha, Karki
10. śrī datta kevalānaṁdāśramada śrī śrī śivānaṁda tīrtharu, śikāripura
11. śrī ādiśaktyātmaka annapūrṇeśvari kṣetra, Hŏranāḍu
Apart from this, the following well known personalities have written opinions for the book -
1. Dr. K. S. Nārāyaṇācārya (ಶ್ರೀಯುತ ಡಾ|| ಕೆ. ಎಸ್. ನಾರಾಯಣಾಚಾರ್ಯ)
2. Vidwan Sri Subrāyaśarmā (ಶ್ರೀಯುತ ವಿದ್ವಾನ್ ಶ್ರೀ ಸುಬ್ರಾಯಶರ್ಮಾ)
3. Vidwan Sri raṁganātha śarmā (ಶ್ರೀಯುತ ಎನ್. ರಂಗನಾಥ ಶರ್ಮಾ)
4. Professor G. Veṁkaṭasubbayya (ಶ್ರೀಯುತ ಪ್ರೊಫ಼ೆಸರ್ ಜಿ. ವೆಂಕಟಸುಬ್ಬಯ್ಯ)
5. Dr. Pāvagaḍa Prakāś Rāv (ಶ್ರೀಯುತ ಡಾ|| ಪಾವಗಡ ಪ್ರಕಾಶರಾವ್)
Contact the publisher at the below address for the copies.
Printer, Publisher & Distributor :
Adithya Printers and Publishers
No.1, Sri Raamaanjaneya Road,
Hanumanthanagar,
Bangalooru - 560019. India
Phone : 080 - 26606776
ಪ್ರಸ್ತಾವನೆ
ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥ ದರ್ಶನಮ್l
ಏತಜ್ಜ್ಞಾನಮಿತಿ ಪ್ರೋಕ್ತಂ ಅಜ್ಞಾನಂ ಯದತೋsನ್ಯಥಾ ll
ಏತಜ್ಜ್ಞಾನಮಿತಿ ಪ್ರೋಕ್ತಂ ಅಜ್ಞಾನಂ ಯದತೋsನ್ಯಥಾ ll
ಆತ್ಮಜ್ಞಾನದಲ್ಲಿಯೇ ನಿತ್ಯವೂ ಸುಸಂಸ್ಥಿತರಾಗಿ ತತ್ತ್ವ ಜ್ಞಾನದ ಸಂಪತ್ತನ್ನು ಸಂದರ್ಶಿಸಬೇಕು. ಅದು ಮಾತ್ರವೇ 'ಜ್ಞಾನ', 'ಪ್ರ-ಜ್ಞಾನ' ಎನ್ನಲಾಗಿದೆ. ಇದಕ್ಕೆ ವ್ಯತಿರಿಕ್ತವಾದುದೆಲ್ಲವೂ 'ಅಜ್ಞಾನ' ಎಂಬುದು ಸಾಕ್ಷಾತ್ ಭಗವಂತನ ನಲ್ನುಡಿ.
ಗುರುಸಂಕಲ್ಪವೇ ಈ ಸತ್ಕಾರ್ಯದ ಶಕ್ತಿ, ಯುಕ್ತಿ ಹಾಗೂ ಮುಕ್ತಿಯಾಗಿದೆ. ಶ್ರೀ ಸದ್ಗುರುಗಳನ್ನು ಅಭಿವಂದಿಸುತ್ತೇನೆ. ಜಗದ್ಗುರು ಶ್ರೀ ಆದಿ ಶಂಕರ ಭಗವತ್ಪಾದಾಚಾರ್ಯರ ಸತ್ಸಂಕಲ್ಪ, ಭಗವದನುಗ್ರಹಪೂರ್ಣವಾದ ಅಂತಃಸ್ಫುರಣೆಯಿಂದ ಅರಳಿದ ಅದ್ವೈತಪುಷ್ಪವಿದು. ಇಲ್ಲಿ, ನನ್ನದೆಂಬುದು ನಿಶ್ಚಯವಾಗಿ ಏನೂ ಇಲ್ಲ. ಈ ಒಂದು ಸತ್ಕಾರ್ಯಕ್ಕೆ 'ಏನಕೇನಪ್ರಕಾರೇಣ' ನನ್ನ ಉಪಯೋಗವಾಗಿದ್ದು ನನ್ನ ಸೌಭಾಗ್ಯ, ಪೂರ್ವಾರ್ಜಿತ ಸುಕೃತ, ಗುರು - ಹಿರಿಯರ ಆಶೀರ್ವಾದ ಹಾಗೂ ಭಗವದಿಚ್ಛೆ.
ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ವಿಚಾರವಾಗಿ ಅನೇಕ ವಿವಾದಗಳಿರುವುದು ಗೋಚರವಾಯ್ತು. ಅವರು ಜನಿಸಿದ ಕಾಲ, ಅವರು ಭಾರತದಾದ್ಯಂತ ಚರಿಸಿದ ಮಾರ್ಗ, ಮಠಗಳ ಪ್ರಥಮ ಆಚಾರ್ಯರು, ಅವರು ಸರ್ವಜ್ಞತ್ವವನ್ನುಪಡೆದುದು, ಅವರ ನಿರ್ಗಮನ ಅಥವಾ ಮಹಾಸಮಾಧಿ, ಇತ್ಯಾದಿ ಹಲವು ವಿಷಯಗಳು. ಏನು ಮಾಡುವುದೆಂದು ಯೋಚಿಸಿದಾಗ, ಶ್ರೀ ಶಂಕರರೇ ಅಂತಃಸ್ಫುರಣೆಯನ್ನು ನೀಡಿದಂತೆ, ಅವರು 'ಅದ್ವೈತ ಭಾವವನ್ನು' ಪ್ರಸಾರ ಮಾಡಿದರು; ಅದೂ ದೇಶದಲ್ಲಿ ಮತ್ತು ಜನರಲ್ಲಿ ಏಕತ್ವವನ್ನು ಮೂಡಿಸಲು ಅಷ್ಟೇ! ವಿವಾದವನ್ನು ಸೃಷ್ಟಿಸಿ ಬೆಳೆಸುವುದಕ್ಕಲ್ಲ. ಹಾಗಯೇ, ನಾವು ಕೂಡಾ ಅವರು ಪ್ರತಿಪಾದಿಸಿರುವ ಅದ್ವೈತ ಜ್ಞಾನಕ್ಕೆ ಪ್ರಾಧಾನ್ಯತೆಯನ್ನು ಕೊಡಬೇಕೇ ವಿನಾ, ವಿವಾದಗಳನ್ನೇ ಬೆಳೆಸುವುದಲ್ಲ’ ಎಂಬ ಅರಿವಾಯ್ತು. ಸಾಕ್ಷಾತ್ ಶ್ರೀ ಆದಿ ಶಂಕರಾಚಾರ್ಯರೇ, ತಮ್ಮ ಹೆಸರಾಂತ "ಶಿವಾನಂದ ಲಹರೀ" ಸ್ತೋತ್ರಮಾಲಿಕೆಯ ಆರನೇ ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ:
ಘಟೋ ವಾ ಮೃತ್ಪಿಂಡೋsಪ್ಯಣುರಪಿ ಚ ಧೂಮೋsಗ್ನಿರಚಲಃ
ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರ ಶಮನಮ್ ।
ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕ ವಚನಾ
ಪದಾಂಭೋಜಂ ಶಂಭೋರ್ಭಜ ಪರಮ ಸೌಖ್ಯಂ ವ್ರಜ ಸುಧೀ ।।
ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರ ಶಮನಮ್ ।
ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕ ವಚನಾ
ಪದಾಂಭೋಜಂ ಶಂಭೋರ್ಭಜ ಪರಮ ಸೌಖ್ಯಂ ವ್ರಜ ಸುಧೀ ।।
ಮಡಕೆ, ಮಣ್ಣಿನ ಮುದ್ದೆ, ಪರಮಾಣ್ವಗ್ನಿ, ಧೂಮವು, ಪರ್ವತ,
ಮಡಿಕೆ, ಬಟ್ಟೆಯು, ನೂಲು, ಎಂಬುದು ಘೋರ ಶಮನವ ಕಳೆವುದೋ?
ವೃಥಾ ಕಂಠ ಕ್ಷೋಭೆಗೊಳಿಸುವ ತರ್ಕ ನುಡಿಗಳ ತೊರೆಯುತ,
ಪರಮ ಸೌಖ್ಯದ ಸುಧೆಯ ಪರಮೇಶ್ವರನ ಪಾದವ ಭಜಿಸಿರೋ ।।
ಮಡಿಕೆ, ಬಟ್ಟೆಯು, ನೂಲು, ಎಂಬುದು ಘೋರ ಶಮನವ ಕಳೆವುದೋ?
ವೃಥಾ ಕಂಠ ಕ್ಷೋಭೆಗೊಳಿಸುವ ತರ್ಕ ನುಡಿಗಳ ತೊರೆಯುತ,
ಪರಮ ಸೌಖ್ಯದ ಸುಧೆಯ ಪರಮೇಶ್ವರನ ಪಾದವ ಭಜಿಸಿರೋ ।।
ಹೀಗೆ, ಅನ್ಯ ವಿಚಾರಗಳಿಗೆ ಪ್ರಾಮುಖ್ಯವನ್ನು ಕೊಡುವುದಕ್ಕಿಂತಲೂ, ಅವರು ಪ್ರತಿಪಾದಿಸಿರುವ ಅದ್ವೈತಾಮೃತಕ್ಕೆ, ಏಕತೆಗೆ ಮತ್ತು ಸಾಮರಸ್ಯ ಹಾಗೂ ಸೌಹಾರ್ದತೆಗೆ ಆದ್ಯತೆ ಕೊಡಬೇಕಾಗುತ್ತದೆ.
ಈ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು, ಕೇವಲ ಅವರ ತತ್ತ್ವಗಳನ್ನು ಪ್ರತಿನಿಧಿಸುವ ನಿತ್ಯ ಪಾರಾಯಣಯೋಗ್ಯವಾದ ಗ್ರಂಥವನ್ನು ರಚಿಸಲಾಗಿದೆ. ಇಲ್ಲಿ ಬರುವ ಅನೇಕ ಕಥೆಗಳಿಗೂ ಅಷ್ಟೇ. ಯಾವುದೇ ವಿಚಾರದಲ್ಲಿ ಗೊಂದಲವನ್ನು ಮಾಡಿಕೊಳ್ಳದೇ, ಅವುಗಳಿಂದ ಲಭ್ಯವಾಗುವ ಜ್ಞಾನಾಮೃತವನ್ನಷ್ಟೇ ಸವಿಯುವುದು ಸೂಕ್ತದಲ್ಲಿ ಸೂಕ್ತ ಎಂಬುದು ಸದಭಿಪ್ರಾಯ.
ಅವರು ಯಾವಾಗಲಾದರೂ ಇರಲಿ, ಎಲ್ಲಿಯಾದರೂ ಸಂಚರಿಸಿರಲಿ, ಎಲ್ಲಿ ಏನೇ ಆಗಿರಲಿ ಅಥವಾ ಬಿಟ್ಟಿರಲಿ, ಅದು ಮುಖ್ಯವೆನಿಸುವುದಕ್ಕಿಂತ, ಅವರು ಬೋಧಿಸಿರುವ ತತ್ತ್ವಗಳು ಮುಖ್ಯವಾಗಬೇಕು ಮತ್ತು ಹೃದಯವೈಶಾಲ್ಯದಿಂದ ನಾವೆಲ್ಲರೂ ಒಂದೇ ಎಂಬ ಅಭೇದಜ್ಞಾನದಿಂದ ಅದ್ವೈತಾಮೃತವನ್ನು ಎಲ್ಲರೂ ಸವಿಯುವಂತಾಗಬೇಕು. ಆಗ ಮಾತ್ರ, ನಿಜವಾಗಿಯೂ ಗುರುವಿನಲ್ಲಿ ಭಕ್ತಿಯನ್ನಿಟ್ಟು ಸನ್ಮಾರ್ಗದಲ್ಲಿ ಸರ್ವರೂ ಮುಂದುವರೆದಂತಾಗುವುದು. ದ್ವೈತಾದ್ವೈತ ವಿಶಿಷ್ಟಾದ್ವೈತ ಮಾರ್ಗದಲ್ಲಿ ಜ್ಞಾನಾರಾಧಕರಾದ ಶ್ರೇಷ್ಠ ವ್ಯಕ್ತಿಗಳಿಂದ ಆಶೀರ್ವಾದವನ್ನು ಕೋರಲಾಗಿದ್ದು, ಕೆಲವರಿಂದ ಸನ್ನುಡಿಗಳು ಬಂದಿವೆ. ಇನ್ನೂ ಕೆಲವರಿಂದ ಬರುವುದಿದೆ. ಈ ಗ್ರಂಥದ ಮುದ್ರಣವಾದ ಮೇಲೂ ಬರುವ ಆಶೀರ್ವಚನಗಳನ್ನು ಮುಂದಿನ ಮುದ್ರಣದಲ್ಲಿ ಅಳವಡಿಸಲಾಗುವುದು. ಈ ಗ್ರಂಥವನ್ನು, ಅಧಿಕೃತ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು, ವಿವಾದಾತ್ಮಕ ವಿಚಾರಗಳನ್ನು ಕೈಬಿಟ್ಟು, ಶ್ರೀ ಶಂಕರರ ತತ್ತ್ವವೊಂದಕ್ಕೇ ಪ್ರಾಧಾನ್ಯತೆಯನ್ನು ನೀಡಿ, "ಸಮನ್ವಯ ದೃಷ್ಟಿಯಿಂದ" ಬರೆದು ಲೋಕಾರ್ಪಣೆ ಮಾಡುತ್ತಿದ್ದೇವೆ.
ಈ ಸತ್ಕೃತಿಯು ಅನೇಕ ಆಕರ ಗ್ರಂಥಗಳನ್ನು ಅವಲೋಕಿಸಿ, ನಿತ್ಯ ಪಾರಾಯಣಕ್ಕಾಗಿ ಬರೆದಿರುವ, ಶ್ರೀ ಶಂಕರಾಚಾರ್ಯರ ಕಥೆಗಳ ಸಂಗ್ರಹವೇ ವಿನಾ, ಸಂಶೋಧನಾ ಕಾರ್ಯವಲ್ಲ.

ಇದೊಂದು ಅದ್ವೈತ ಸಮನ್ವಯ
ಗ್ರಂಥ.
ll ಸರ್ವೇ ಜನಾಃ ಸುಖಿನೋ ಭವಂತು ll
l ಸರ್ವಂ ಶ್ರೇಯೋsಭಿವೃದ್ಧಿರಸ್ತು l
ll ಶುಭಂ ಭೂಯಾತ್ ll
ಇಂತು ಗುರುಭಕ್ತ, ಸಜ್ಜನಸೇವಾಕಾಂಕ್ಷಿ.ಕೆ. ಪಿ. ರತ್ನಾಕರ ಭಟ್ಟ.